2ndpuc ಕನ್ನಡ ಕದಡಿದ ಸಲಿಲಮ್ ತಿಳಿವಂದದೆ ನೋಟ್ಸ್ pdf with text


Hi Students

ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮೊದಲ ಪದ್ಯವಾದ ಕದಡಿದ ಸಲಿಲಂ ತಿಳಿವಂದದೆ ನೋಟ್ಸ್ ವಿವರಣೆಯನ್ನು ಸಂಪೂರ್ಣವಾಗಿ ಕೊಡಲಾಗಿದೆ .

ಬಹಳ ಸರಳ ರೀತಿಯಲ್ಲಿ ವಿವರಣೆ ಕೊಡಲಾಗಿದೆ.

ಇದನ್ನೇ ಓದಿಕೊಂಡು ಉತ್ತಮ ಅಂಕಗಳನ್ನು ಗಳಿಸಿ .


ಶುಭವಾಗಲಿ



To facilitate the students who are studying in second PUC, the first verse, kadadi salilam, is fully explained in notes.


 Explained in a very simple manner.


 Read this and get good marks.




ಪದ್ಯ - ೧


ಕದಡಿದ ಸಲಿಲಂ ತಿಳಿವಂದದೆ


1. ಒಂದು ವಾಕ್ಯದಲ್ಲಿ ಉತ್ತರಿಸಿ : (ಒಂದು ಅಂಕದ ಪ್ರಶ್ನೆಗಳು) 

1. ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು?


ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಬಹುರೂಪಿಣೀ ವಿದ್ಯೆ.


2. ಯಾರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು? ರಾಮ-ಲಕ್ಷ್ಮಣರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು.


3. ಮಯತನೂಜೆ ಎಂದರೆ ಯಾರು? ಮಯನ ಮಗಳಾದ (ರಾವಣನ ಹೆಂಡತಿ) ಮಂಡೋದರಿಯೇ ಮಯತನೂಜೆ,








4. ಸೀತೆಯನ್ನು ರಾವಣ ಎಲ್ಲಿರಿಸಿದ್ದನು? ಸೀತೆಯನ್ನು ರಾವಣ ಪ್ರಮದದನದಲ್ಲಿರಿಸಿದ್ದನು.


5. ರಾವಣನ ಆಗಮನವನ್ನು ಸೀತೆಗೆ ತೋರಿದವರು ಯಾರು? ರಾವಣನ ಆಗಮನವನ್ನು ಸೀತೆಗೆ ತೋರಿದವರು ಖಚರ (ರಾಕ್ಷಸರ) ಕಾಂತೆಯರು.


6. ಸೀತೆ ಯಾವುದನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು? ಸೀತೆ ರಾವಣನ ರೂಪವನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು.


7. ಸೀತೆ ರಾವಣನನ್ನು ಏನೆಂದು ಬೇಡಿಕೊಂಡಳು?


ರಾಮನ ಆಯುಷ್ಯ ಮತ್ತು ಪ್ರಾಣದ ವಿಷಯಕ್ಕೆ ಬರಬೇಡ ಎಂದು ಬೇಡಿಕೊಂಡಳು.


8. ರಾವಣನಿಗೆ ಯಾರ ಬಗ್ಗೆ ವೈರಾಗ್ಯ ಮೂಡಿತು?


ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿತು.


9. ವಿಭೀಷಣ ಯಾರು?


ವಿಭೀಷಣ ರಾವಣನ ತಮ್ಮ.


10.ಸೌಮಿತ್ರಿ ಎಂದರೆ ಯಾರು?


ಸೌಮಿತ್ರಿ ಎಂದರೆ ಸುಮಿಯ ಮಗ ಲಕ್ಷಣ





II. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ : (೨ ಅಂಕದ ಪ್ರಶ್ನೆಗಳು)


1. ಬಹುರೂಪಿಣಿ ವಿದ್ಯೆಯು ರಾವಣನಿಗೆ ಏನೆಂದು ಆಶ್ವಾಸನೆಯಿತ್ತಿತು? ಬಹುರೂಪಿಣಿ ವಿದ್ಯೆಯು ಚಕ್ರಧರನಾದ ಲಕ್ಷ್ಮಣನನ್ನು ಚರಮ ದೇಹಧಾರಿಯಾದ ರಾಮನನ್ನು ಉಳಿಸಿ ಉಳಿದವರನ್ನು ಉಳಿಸುವುದಿಲ್ಲ (ಸಾಯಿಸುತ್ತೇನೆಂದು) ಎಂದು ಆಶ್ವಾಸನೆಯಿತ್ತಿತು.


2. ರಾವಣ ತನ್ನ ಅಂತಃಪುರದ ಸ್ತ್ರೀಯರನ್ನು ಹೇಗೆ ಸಂತೈಸಿದನು?


ನಿಮಗೆ ಈ ರೀತಿಯಾಗಿ ತೊಂದರೆಯನ್ನು ಮಾಡಿದ ಅಂಗದಾದಿಗಳನ್ನು ಭೂಭಂಗಮಾತ್ರದಲ್ಲಿ


(ಹುಬ್ಬುಗಂಟಿಕ್ಕುವಷ್ಟರಲ್ಲಿ) ಬಂಧಿಸಿ ತಂದು ಅವರಿಗೆ ನಿಮ್ಮ ಮುಂದೆಯೇ ಅನೇಕ ವಿಧವಾಗಿ ಅವಮಾನ ಮಾಡುತ್ತೇನೆಂದು ಸಮಾಧಾನಪಡಿಸಿದರು.


3. ಸೀತೆಯ ತಲ್ಲಣಕ್ಕೆ ಕಾರಣವೇನು?


ತನ್ನ ಕಡೆ ಬರುತ್ತಿದ್ದ ರಾವಣನನ್ನು ನೋಡಿದ ಸೀತೆ ರಾಮ-ಲಕ್ಷ್ಮಣರ ಬಗ್ಗೆ ಇನ್ನೇನು ಕೆಟ್ಟ ಸುದ್ದಿಯನ್ನು ಹೇಳುತ್ತಾನೋ ಎಂದು ತಲ್ಲಣಗೊಂಡಳು.


4. ರಾವಣನು ಸೊಕ್ಕಿನಿಂದ ಸೀತೆಯನ್ನುದ್ದೇಶಿಸಿ ಆಡಿದ ಮಾತುಗಳಾವುವು? ಸೀತೆ, ನನಗೆ ಬಹುರೂಪಿಣೀ ವಿದ್ಯೆ ಒಲಿದಿದೆ. ಇನ್ನು ನನಗೆ ಸರಿಸಾಟಿಯಾದ ಶತ್ರುಗಳು ಯಾರು ಇಲ್ಲ. ನೀನು ನಿನ್ನ ಮೆಚ್ಚಿನ ರಾಮನ ಆಸೆಯನ್ನು ಬಿಟ್ಟು, ನನ್ನನ್ನು ಇಷ್ಟಪಟ್ಟು ಈ ಸಾಮ್ರಾಜ್ಯ ಸುಖವನ್ನು ಅನುಭವಿಸು ಎಂದು ಸೊಕ್ಕಿನಿಂದ ರಾವಣ ಮಾತನಾಡಿದೆ.


5. ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿದ ಸಂದರ್ಭವನ್ನು ವಿವರಿಸಿ. ರಾವಣನು ಸೊಕ್ಕಿನಿಂದ ಆಡಿದ ಮಾತುಗಳನ್ನು ಕೇಳಿದ ಸೀತೆ ರಾವಣನಲ್ಲಿ ಕರುಣೆಯಿಂದ ನನ್ನ ರಾಮನ ಆಯುಷ್ಯ ಮತ್ತು ಪ್ರಾಣದ ವಿಷಯಕ್ಕೆ ಬರಬೇಡ' ಎಂದು ಹೇಳಿ ಮೂರ್ಛ ಹೋದಾಗ ಸೀತೆಯ ಪತಿಭಕ್ತಿಯನ್ನು ಕಂಡು ರಾವಣನಿಗೆ ಸೀತೆಯ ಮೇಲೆ ವೈರಾಗ್ಯ ಮೂಡಿತು.


6. ರಾವಣನು ತನ್ನ ಆಪ್ತರನ್ನು ಕುರಿತು ಏನೆಂದು ಹೇಳಿದನು? ಗುಣಪರಿಪಾಲಕಳಾದ ಸೀತೆ ನನಗೆ ಮನಸ್ಸು ಕೊಡಲಿಲ್ಲ. ನನ್ನ ಶ್ರೇಷ್ಠವಾದ ವಸ್ತ್ರ, ದೇಹ ಸೌಂದರ್ಯವನ್ನು ಇಷ್ಟಪಡದೆ ಈ ಖೇಚರ ರಾಜ್ಯಲಕ್ಷ್ಮಿಯನ್ನು ಹುಲ್ಲುಕಡ್ಡಿಗೆ ಸಮನಾಗಿ ಭಾವಿಸಿದಳು. ಇಂತಹ ಸಂದರ್ಭದಲ್ಲಿ ಪರಾಕ್ರಮಿಯಾದ ನಾನು ಅವಳನ್ನು ಅಪೇಕ್ಷಿಸಿ ತನ್ನ ಗೌರವವನ್ನು ಕಡಿಮೆ ಮಾಡಿಕೊಳ್ಳುವುದಿಲ್ಲವೆಂದು ಆಪ್ತರಿಗೆ ಹೇಳಿದ,


7. ಈಗಲೇ ಸೀತೆಯನ್ನು ರಾಮನಿಗೊಪ್ಪಿಸಲು ರಾವಣ ಬಯಸಲಿಲ್ಲವೇಕೆ?


ಈಗಲೇ ಸೀತೆಯನ್ನು ರಾಮನಿಗೊಪ್ಪಿಸಿದರೆ, ಇದುವರೆಗೂ ನಾನು ಕಾಪಾಡಿಕೊಂಡು ಬಂದ ನನ್ನ ಪರಾಕ್ರಮ, ಅಧಿಕಸಾಮರ್ಥ್ಯ, ಶೌರ್ಯ, ಬಿರುದು, ಗೌರವಗಳಿಗೆ ಬೆಲೆ ಸಿಗದಂತಾಗುತ್ತದೆ ಎಂದು ಸೀತೆಯನ್ನು ರಾಮನಿಗೆ ಒಪ್ಪಿಸಲಿಲ್ಲ.




III. ಐದಾರು ವಾಕ್ಯಗಳಲ್ಲಿ ಉತ್ತರಿಸಿ : ೪ ಅಂಕದ ಪ್ರಶ್ನೆಗಳು)


1. ರಾವಣನು ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭವನ್ನು ವಿವರವಾಗಿ ಬರೆಯಿರಿ, ಸೀತೆಯ ರಕ್ಷಣೆಗೆ ರಾಮು ಲಕ್ಷಣರು ಬಂದೇ ಬರುತ್ತಾರೆಂದು ಅರಿತ ರಾವಣ, ಧ್ರುವಮಂಡಲದಂತೆ ಚಲಿಸದೆ (ಸ್ಥಿರವಾಗಿ) ಮನಸ್ಸನ್ನು ನಿಗ್ರಹಿಸಿಕೊಂಡು, ದಿವ್ಯ ಮಂತ್ರಗಳನ್ನು ಹೇಳುತ್ತಾ ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಂಡನು. ಆದು ಮುಂಗಾರಿನ ಸಿಡಿಲಿನ ಆವೇಶವನ್ನು ಮೀರಿಸುವಂತೆ, ಯಮನ ನಾಲಗೆಯೇ ಅವತರಿಸಿ ಬಂದಂತೆ ಬಂದು, ರಾವಣನ ಎದುರಿನಲ್ಲಿ ಪ್ರತ್ಯಕ್ಷವಾಗಿ "ನೀನು ನನ್ನನ್ನು ಬರಮಾಡಿಕೊಂಡ ಉದ್ದೇಶವೇನೆಂದು' ಕೈಯನ್ನು ಮುಂದೆ ಚಾಚಿ ಕೇಳಿತು. ಅದು ರಾವಣನ ಇಂಗಿತವನ್ನೆರಿತು. ರಾಮ-ಲಕ್ಷ್ಮಣರನ್ನು ಬಿಟ್ಟು ಉಳಿದ ಯಾರನ್ನಾದರೂ ಕೊಲ್ಲುತ್ತೇನೆಂದಾಗ ಅವರಿಬ್ಬರನ್ನು ಬಿಟ್ಟು ಉಳಿದವರ ಅಳಿವು (ಸಾವು) ನನಗೇತಕ್ಕೆಂದು ಆ ವಿದ್ಯೆಗೆ ತಿಳಿಸಿದ ರಾವಣ ಅದಕ್ಕೆ ನಮಸ್ಕರಿಸಿ ನಂತರ ಶಾಂತಿಜಿನಭವನಕ್ಕೆ ಹೋದನು,


2. ಪ್ರಮದವನದಲ್ಲಿ ರಾವಣ-ಸೀತೆಯರ ನಡುವೆ ನಡೆದ ಸಂಭಾಷಣೆಯನ್ನು ವಿವರಿಸಿ, ಪ್ರಮದವನಕ್ಕೆ ರಾವಣನ ಬರುವಿಕೆಯನ್ನು ಕಂಡು ಭಯಪಡುತ್ತಿದ್ದ ಸೀತೆಯನ್ನು ನೋಡಿದ ರಾವಣ ಸೊಕ್ಕಿನಿಂದ “ಸೀತೆ ನನಗೆ ಬಹುರೂಪಿಣೀ ವಿದ್ಯೆ ಸಿದ್ಧಿಸಿದೆ. ಇನ್ನ ನನಗೆ ಸರಿಸಾಟಿಯಾದ ಯಾವ ಶತ್ರುವೂ ಇಲ್ಲ. ನೀನು ನಿನ್ನ ಮೆಚ್ಚಿನ ರಾಮನ ಆಸೆಯನ್ನು ಬಿಟ್ಟು ನನ್ನೊಂದಿಗೆ ಸೇರಿ ಈ ಸಾಮ್ರಾಜ್ಯ ಸುಖವನ್ನು ಅನುಭವಿಸು” ಎಂದು ಹೇಳಿದಾಗ ಭಯಗೊಂಡ ಸೀತೆ “ರಾವಣ ನನಗೆ ಕರುಣೆ ತೋರಿಸು, ದಯವಿಟ್ಟು ರಾಮನ ಆಯಸ್ಸು ಮತ್ತು ಪ್ರಾಣದ ವಿಷಯಕ್ಕೆ ಬರಬೇಡ" ಎಂದು ರಾವಣನಿಗೆ ಹೇಳುತ್ತಾ ಸೀತೆ ಮೂರ್ಛ ಹೋದಳು.


3. ರಾವಣನ ಮನಃಪರಿವರ್ತನೆಯ ಸಂದರ್ಭವನ್ನು ಕವಿ ಹೇಗೆ ಚಿತ್ರಿಸಿದ್ದಾನೆ? ವಿವರಿಸಿ, ರಾವಣನು ಮೂರ್ಛ ಹೋದ ಸೀತೆಯ ಪತಿಭಕ್ತಿಯನ್ನು ಕಂಡು ಅವಳ ಮೇಲೆ ಅನುಕಂಪ ಹುಟ್ಟಿ ತನ್ನ ನೀಚಕೃತ್ಯಕ್ಕೆ ತನಗೆ ತಾನೆ ಬೈದುಕೊಂಡು, ಹೇಗೆ ಕಲಕಿ ಹೋದ ನೀರು ತನಗೆ ತಾನೆ ತಿಳಿಯಾಗುತ್ತದೆಯೋ! ಸೂರ್ಯನು ತನಗೆ ಅಂಟಿದ (ಹತ್ತಿದ) ಸಂಧ್ಯಾರಾಗದಿಂದ (ಕತ್ತಲೆಯಿಂದ) ಬಿಡಿಸಿಕೊಳ್ಳುತ್ತಾನೋ! ಹಾಗೆಯೇ ಸೀತೆಯ ಮೇಲಿನ ಕಾಮ ವ್ಯಾಮೋಹದಿಂದ ಬಿಡಿಸಿಕೊಂಡ ರಾವಣನಿಗೆ ಸೀತೆಯ ಮೇಲೆ ಜೈಲಾಗ್ರ ಉದಿತು, ಉದಾತ್ತರಾದವರಲ್ಲಿ ಮಾತ್ರವೇ ಉಂಟಾಗುವ ಸ್ಥಿರವಾದ ಗೌರವ ಅವನಲ್ಲಿ ಉಂಟಾಯಿತು.


4. ರಾವಣನಲ್ಲಿ ಕಂಡು ಬರುವ ಪಶ್ಚಾತ್ತಾಪವನ್ನು ಕವಿ ಹೇಗೆ ನಿರೂಪಿಸಿದ್ದಾನೆ? 

ರಾವಣನಿಗೆ ಸೀತೆಯ ಪತಿಭಕ್ತಿಯನ್ನು ಕಂಡು, ಅವಳ ಮೇಲಿನ ಚಂಚಲವಾದ ಕಾಮವ್ಯಾಮೋಹ ಹೋಗಿ, ಕರುಣೆಯುಂಟಾಗಿ, ಪ್ರಾಣ ಪ್ರಿಯರಾದ ಇವರನ್ನು ತನ್ನ ಕರ್ಮ ವರದಕಾರಣದಿಂದ ದೂರಮಾಡಿ, ಅವರಿಗೆ ದುಃಖವನ್ನುಂಟು ಮಾಡಿ, ನಾನೂ ಸಹ ಅವಿವೇಕಿಯಾಗಿ ಬದುಕಿ ತನ್ನ ಕುಲದ ಗೌರವವನ್ನು ಹಾಳುಮಾಡಿಕೊಂಡು, ಎಲ್ಲರೂ ನನ್ನ ಬಗ್ಗೆ ಕಟ್ಟ ಮಾತುಗಳನ್ನಾಡುವಂತ ಮಾಡಿಕೊಂಡ. ಕಾಮ ವ್ಯಾಮೋಹದ ಚಟಕ್ಕೆ ಬಲಿಯಾಗಿ ತಮ್ಮ ವಿಭೀಷಣನ ಹಿತವಚನವನ್ನು ಕೇಳದೆ ಒಳ್ಳೆಯವನಾದ ಅವನನ್ನು ದೂರ ಮಾಡಿದೆ. ತನ್ನ ದುರ್ವ್ಯಸನದಿಂದ ತನ್ನ ಯಶಸ್ಸನ್ನು, ಉನ್ನತಿಯನ್ನು, ಜನರ ನಂಬಿಕೆಯನ್ನು ಕಳೆದುಕೊಂಡೆ ಎಂದು ಪಶ್ಚಾತ್ತಾಪದಿಂದ ಮಾತನಾಡಿಕೊಳ್ಳುತ್ತಾನೆ.


 5, 'ಕದಡಿದ ಸಲಿಲಂ ತಿಳಿವಂದದೇ ಕಾವ್ಯಭಾಗದಲ್ಲಿ ಕಂಡು ಬರುವ ರಾವಣನ ವ್ಯಕ್ತಿತ್ವವನ್ನು ವಿಮರ್ಶಿಸಿ,


ನಿಮ್ಮ ಮಾತುಗಳಲ್ಲಿ ಉತ್ತರಿಸಿ, ಇಲ್ಲಿನ ರಾವಣ ಸದ್ಗುಣೋಪೇತನಾದ ಮಹಾಪುರುಷ, ಪರವಿರು ವ್ರತಧಾರಿಯಾದ ರಾವಣನು ಸ್ವಭಾವತಹಃ ಒಳ್ಳೆಯ ಗುಣವುಳ್ಳವನೆ, ದುರ್ವಿಧಿಯ ಕಾರಣದಿಂದ ಸೀತೆಯನ್ನು ಅಪಹರಿಸಿ ಲಂಕೆಗೆ ಕೊಂಡೊಯ್ಯುತ್ತಾನೆ. ಅವಳನ್ನು ಒಲಿಸಿಕೊಳ್ಳಲು ಯಾವುದೇ ಬಲತ್ಕಾರದಿಂದ ವರ್ತಿಸದೆ ಅವಳ ಮನಃಪರಿವರ್ತನೆಗೆ ಪ್ರಯತ್ನಿಸುತ್ತಾನೆ. ಮುಂದೆ ಸೀತೆ ಮೂರ್ಛ ಹೋದಾಗ ಅವಳ ಪತಿಭಕ್ತಿಯನ್ನು ಕಂಡು ಕರುಣೆಯುಂಟಾಗಿ ವೈರಾಗ್ಯ ಹೊಂದುತ್ತಾನೆ: ನಾನು ತಪ್ಪು ಮಾಡಿದೆನೆಂದು ತಿಳಿದು ಸೀತೆಯ ದುಃಖವನ್ನು ಕಂಡು ತಾನು ಸಹ ಮರುಗುತ್ತಾನೆ. ಅದುವರೆಗೆ ಇವನಲ್ಲಿದ್ದ ಕಾಮವ್ಯಾಮೋಹ ಹೋಗಿ "ಕದಡಿದ ಸಲಿಲು (ನೀರು) ತಿಳಿಯಾಗುವಂತೆ" ಇವನ ಮನಸ್ಸು ಕ್ರಮೇಣ ತಿಳಿಯಾಗಿ ಸೀತೆಯ ಮೇಲೆ ಗೌರವಭಾವ ಉಂಟಾಗುತ್ತದೆ, ನಂತರ ಸೀತೆಯನ್ನು ರಾಮನಿಗೆ ಒಪ್ಪಿಸಬೇಕೆಂದು ಯೋಚಿಸಿ, ಜೊತೆಗೆ ತನ್ನ ಗೌರವಕ್ಕೂ ಧಕ್ಕೆ ಬರದಂತೆ ನೋಡಿಕೊಳ್ಳಲು ಕ್ಷತ್ರಿಯ ಸಹಜವಾದ ಪೌರುಷದ ಪ್ರದರ್ಶನಕ್ಕಾಗಿಯೂ ಯೋಚಿಸಿ ಮುಂದೆ ಯುದ್ಧ ಮಾಡಿ, ಯುದ್ಧದಲ್ಲಿ ರಾಮ-ಲಕ್ಷ್ಮಣರನ್ನು ಹಿಡಿದು ತಂದು ಸೀತೆಯನ್ನು ರಾಮನಿಗೆ ಒಪ್ಪಿಸಬೇಕೆಂಬ ಉದಾತ್ತವಾದ ಯೋಚನೆಯಲ್ಲಿ ತೊಡಗುತ್ತಾನೆ.


IV. ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು :


1. ಉಳಿದವರಳಿದೆನಗೇವುದು?


ಕವಿ ನಾಗಚಂದ್ರ' ಬರೆದಿರುವ 'ಕದಡಿದ ಸಲಿಲಂ ತಿಳಿವಂದದೆ' ಎಂಬ ಕಾವ್ಯಭಾಗದಿಂದ ಈ


ವಾಕ್ಯವನ್ನು ಆರಿಸಿಕೊಳ್ಳಲಾಗಿದೆ. ರಾವಣ ಬಹುರೂಪಿಣೀ ವಿದ್ಯೆಗೆ ಹೇಳಿದ ಮಾತು ಇದಾಗಿದೆ. ರಾವಣನ ಎದುರಿಗೆ ಬಹುರೂಪಿಣೀ ವಿದ್ಯೆ ಪ್ರತ್ಯಕ್ಷವಾದಾಗ ರಾವಣ ರಾಮ-ಲಕ್ಷ್ಮಣರನ್ನು ಕೊಲ್ಲುವ


ವಿಷಯವನ್ನು ಪ್ರಸ್ತಾಪಿಸುತ್ತಾನೆ. ಅದಕ್ಕೆ ಆದು ರಾಮ-ಲಕ್ಷ್ಮಣರನ್ನು ಬಿಟ್ಟು ಉಳಿದ ಯಾರನ್ನಾದರೂ ಕೊಲ್ಲುತ್ತೇನೆಂದು ಹೇಳಿದಾಗ ಇದಕ್ಕೆ ಪ್ರತಿಯಾಗಿ ರಾವಣ ಉಳಿದವರ ಸಾವು ತನಗೆ ಏತಕ್ಕೆಂದು ಮರು


ಪ್ರಶ್ನೆಯನ್ನು ಹಾಕುವ ಸಂದರ್ಭ ಇದಾಗಿದೆ. ಮೇಲಿನ ಸಂದರ್ಭ ಬಹುರೂಪಿಣೀ ವಿದ್ಯೆಯು ಸತ್ಯ, ಧರ್ಮ, ನ್ಯಾಯ, ಪ್ರಾಮಾಣಿಕತೆಗೆ ಹಿಡಿದ. ಕೈ ಗನ್ನಡಿಯಂತಿದೆ


2. ಸಮಧಿಕರಾರ್ ಜಗತ್ರಯದೊಳಿನ್ನೇನಗೆ ?

ಕವಿ ನಾಗಚಂದ್ರ' ಬರೆದಿರುವ ಕದಡಿದ ಸಲಿಲಂ ತಿಳಿವಂದದೆ" ಎಂಬ ಕಾವ್ಯಭಾಗದಿಂದ

ಈ ವಾಕ್ಯವನ್ನು ಆರಿಸಿಕೊಳ್ಳಲಾಗಿದೆ. ರಾವಣನು ತನಗೆ ತಾನೇ ಹೇಳಿಕೊಂಡ ಮಾತನ್ನು ಕವಿ ಇಲ್ಲಿ ವರ್ಣಿಸಿದ್ದಾನೆ.


ಶಾಂತಿ ದಿನ ಭವನದಲ್ಲಿ ಮಹಾಪೂಜೆಯನ್ನು ಮಾಡಿಸಿ, ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಂಡು, ಅದರ ವಿದ್ಯಾಪ್ರಭಾವವನ್ನು ಪರೀಕ್ಷಿಸಿ, ಸಂತೋಷಪಟ್ಟು, ನಂತರ ಅಹಂಕಾರದಿಂದ “ನನಗೆ ಮೂರು ಲೋಕದಲ್ಲಿಯೂ ಸಮಬಲರಾದವರು ಯಾರು ಇಲ್ಲ” ಯುದ್ಧದಲ್ಲಿ ತನ್ನನ್ನು ಗೆಲ್ಲುವವರಾರಿಲ್ಲವೆಂದು ಗರ್ವ ಪಡುವ ಸಂದರ್ಭವಿದಾಗಿದೆ.



For more educational updates follow us on Instagram Telegram Facebook and YouTube channel 👈






Comments

Popular posts from this blog

1StYEAR B.COM 1SEM KANNADA SYLLABUS 2023 COMPLETE INFORMATION 👈

PUC, DEGREE, DIPLOMA , Engeneering STUDENTS ಗೆ ಉಚಿತ LAPTOP 💻 ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ !!